ಒಡೆಯರ್ ವಂಶವನ್ನು    ಕ್ರಿ .ಶ  ೧೩೯೯ದಲ್ಲಿ  ಯದುರಾಯ  ಸ್ಥಾಪಿಸಿದವರು ಮೈಸೂರು ವಿಜಯನಗರ ಸಾಮ್ರಾಜ್ಯದ ಒಂದು ಅಂಗವಾಗಿದ್ದು ಒಡೆಯರ್ ಅವರು ಸಾಮಂತರಾಗಿ ಸಾಮ್ರಾಟನಿಗೆ  ಕಪ್ಪಾ ಸಲ್ಲಿಸುತ್ತಿದ್ದರು ನಂತರದ ಬ್ರಿಟಿಷ್ ಆಡಳಿತದಲ್ಲಿ viceroy  ಆಗಿದ್ದರು ವಿಜಯನಗರ ಸಾಮ್ರಾಜ್ಯ  ಪೂರ್ಣ ದಕ್ಷಿಣ ಭಾರತ  ಪರ್ಯಾಯ  ದ್ವೀಪವನ್ನು ಅಳುತಿತ್ತು .

ಸಾಮ್ರಾಜ್ಯದ ಪತನದ ನಂತರ ರಾಜ ಒಡೆಯರ್ ೧ಶ್ರೀರಂಗಪಟ್ಟಣವನ್ನು ತಮ್ಮ ಸುಪರ್ದಿಗೆಗೆ   ತೆಗೆದುಕೊಂಡು ಆಳಲಾರಂಭಿಸಿದರು ಕಂಠೀರವ ನರಸಿಂಹರಾಜ ಒಡೆಯರ್ ೧ ಮತ್ತು ಚಿಕ್ಕದೇವರಾಜ ಒಡೆಯರ್ ೧೬೦೦ ರಲ್ಲಿ ಇದನ್ನು ಬೆಳಸಿದರು .

ನಂತರದ ವರ್ಷಗಳಲ್ಲಿ  ಹೈದೆರ್ ಅಲಿ ಇವರ ಸೈನ್ಯದಲ್ಲಿ ದಳವಾಯಿ ಆಗಿದ್ದವನು ರಾಜ್ಯವನ್ನು ಕಸಿದುಕೊಂಡು  ಆಳಲಾರಂಭಿಸಿದನು ತದನಂತರ  ೧೭೦೦ಸುಮಾರಿನಲ್ಲಿ ಅವನ ಮಗನಾದ ಟೀಪುಸುಲ್ತಾನ್ ಆಳುತ್ತಿದ್ದನು ಆದರೆ ಕೃಷ್ಣರಾಜ ಒಡೆಯರ್ ೨ ಅವರ ಪತ್ನಿ ಮಹಾರಾಣಿ ಲಕ್ಷ್ಮಮ್ಮಣಿಯವರ ಪರಿಶ್ರಮದಿಂದ ೪ ನೇ ಮೈಸೂರು ಬ್ರಿಟಿಷ್ ಯುದ್ಧ ದಲ್ಲಿ ಟೀಪುಸುಲ್ತಾನ್ ಸಾವಿನೊಂದಿಗೆ ಮತ್ತೆ ಮೈಸೂರು ಒಡೆಯರ್ ಪಾಲಾಯಿತು .

ಮಹಾರಾಣಿ ಲಕ್ಷ್ಮಮ್ಮಣಿ ಅವರು  ಸತತ ಪರಿಶ್ರಮಪಟ್ಟು ತಮ್ಮ ಮೊಮ್ಮಗ ಮುಮ್ಮಡಿ ಕೃಷ್ಣದತ್ತ ಒಡೆಯರನ್ನ್ನು(ಕೃಷ್ಣರಾಜ ಒಡೆಯರ್ ೩) ಪಟ್ಟಕ್ಕೇರಿಸಿ ರಾಜವಂಶದ  ಭವ್ಯ ಕಾಲಕ್ಕೆ ಬುನಾದಿ ಹಾಕಿದರು.ಈ ಸುವರ್ಣ ಯುಗಕ್ಕೆ ಕರಣರಾದಂತ ಅರಸರು H.H. ಚಾಮರಾಜ ಒಡೆಯರ್ (೧೦),H.H. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು H.H. ಡಾ .ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ .

ಒಡೆಯರ್ ರಾಜವಂಶವು  ಡೆಕ್ಕನ್ ಪ್ರಸ್ಥಭೂಮಿಯನ್ನು ಹಿಂದೆ  ಆಳಿದ ಕದಂಬ ,ರಾಷ್ಟ್ರಕೂಟ ,ಗಂಗಾ ,ಚಾಲುಕ್ಯ ,ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯದ ಹಿರಿಯರ ಕೊಡುಗೆಯಾದ ಭವ್ಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಪಾಲಕರು.  ಒಡೆಯರ್ ರಾಜವಂಶವು  ತಮ್ಮ  ೬೦೦ವರ್ಷದ  ಆಳ್ವಿಕೆಯಲ್ಲಿ  ಭಾರತದ ಅನೇಕ ಸಾಮ್ರಾಜ್ಯಗಳ ಏಳುಬಿಳುಗಳನ್ನು ಕಂಡಿದೆ.ದಬ್ಬಾಳಿಕೆಯಿಂದ ರಾಜ್ಯವನ್ನು ಕಸಿದುಕೊಳ್ಳುವ  ಪ್ರಯತ್ನಗಳನ್ನು ವಿಫಲಗೊಲಿಸಿದೆ .  ಅನೇಕ ರಾಜಕಾರಣ ಸಹಿಸಿದೆ ಇಷ್ಟೆಲ್ಲಾ ಏರುಪೇರುಗಳಿದ್ದರು ಈ ರಾಜವಂಶದ ಕೊಡುಗೆ ಈ ಪ್ರಸ್ಥಭೂಮಿಗೆ ಅಪರಿಮಿತವಾದದ್ದು ೬೦೦ವರುಷದ ಉದಕ್ಕೂ ಮೈಸೂರಿನ ಒಡೆಯಯರ್ ವಂಶ  ನಾಡನ್ನಾಳಿದ ಹಿರಿಯರ ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ಪಾಲಿಸಿ ,ಪೋಷಿಸಿ ಮತ್ತು ಬೆಳೆಸಲು ಎಡೆಬಿಡದೆ ಶ್ರಮಿಸಿದೆ, ಶ್ರಮಿಸುತ್ತದೆ ಮತ್ತು ಮುಂದೆಯು ಶ್ರಮಿಸುತ್ತದೆ. ಈ ನಿರೂಪಣೆಯಲ್ಲಿ  ಡೆಕ್ಕನ್ ಮತ್ತು ಒಡೆಯರ್ ರಾಜವಂಶದ ಹೆಸರು ಭದ್ರವಾಗಿ ಬೆಸೆದಿದೆ. ಇಂದಿಗೂ ಭವ್ಯ ದಕ್ಕನಿ  ಸಂಸ್ಕೃತಿಯ ಸೊಬಗು  ಮತ್ತು  ಅನಾದಿಕಾಲದ ಪರಂಪರೆಗಳ ಪರಿಮಳ  ವೇದ್ಯವಾಗುತ್ತದೆ.

ಮೈಸೂರಿನ ಒಡೆಯರು

ಮೈಸೂರು ರಾಜ್ಯ ಗೌರವ ಲಾಂಛನ

ಮೈಸುರು ದಸರಾ

dasara

ಮೈಸೂರು ದಸರಾ ಉತ್ಸವ

ದಸರಾ’ ಶಬ್ದ ಬಂದದ್ದು ‘ದಶಹರ’ ಎಂಬ ಸಂಸ್ಕೃತ ಪದದಿಂದ ‘ದಶ’ಎಂದರೆ ಹತ್ತು ‘ಅಹನ’ಎಂದರೆ ಹಬ್ಬದ ದಿನ . ೧೦ದಿನ ದುರ್ಗಾ ಮಾತೆಯ ಪೂಜೆ,ಹತ್ತನೆಯ ದಿನವೇ ದಶಹರಾ ಅಶ್ವಯುಜ ಶುದ್ಧದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ನವರಾತ್ರಿ ಹಬ್ಬದ ಆಚರೆಣೆಯ ಹುಟ್ಟು ಹೇಗೆ ಆಯಿತೆಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿದ್ದರೂ ಇದಕ್ಕೆ ಸಂಬಂಧ ಪಟ್ಟಂತೆ ಎರಡು ಮೂಲಗಳಿವೆ. ಅವು -ಪೌರಾಣಿಕ ಹಾಗು ಐತಿಹಾಸಿಕ.

ಪೌರಾಣಿಕ ಮೂಲ

ವಿಷ್ಣುಪುರಾಣದಲ್ಲಿ ಬರುವ ಸಮುದ್ರ ಮಂಥನದ ಸಂದರ್ಭದಲ್ಲಿ ದೈತ್ಯರಮೇಲೆ ದೇವತೆಗಳು ಸಾಧಿಸಿದ ವಿಜಯ. ರಾಮಾಯಣದಲ್ಲಿ ರಾಮನಿಂದ ರಾವಣಾಸುರನ ವಧೆ ಮತ್ತು ಮೈಸೂರಿಗೆ ಮುಖ್ಯವಾಗಿ ಸಂಬಂಧ ಪಟ್ಟದ್ದು ಕಾಳಿಕಾ ಪುರಾಣದಲ್ಲಿ ಬರುವ ದುರ್ಗಾದೇವಿಯಿಂದ ಮಹಿಷಾಸುರನ ಸಂಹಾರ.

dasara - orgin

ಐತಿಹಾಸಿಕ ಮೂಲ

ದಕ್ಷಿಣ ಭಾರತದ ಚರಿತ್ರೆಯ ಪ್ರಕಾರ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಈ ಹಿಂದೂ ಹಬ್ಬ ನವರಾತ್ರಿ ಆಚರೆಣೆಗೆ ವಿಶೇಷವಾದ ಪ್ರಾಮುಖ್ಯತೆ ಇತ್ತು. ೧೫ನೇ ಶತಮಾನದಿದೇಚೆಗೆ ಈ ದೇಶಕ್ಕೆ ಬಂದ ಪಾಶ್ಚಾತ್ಯ ಪ್ರವಾಸಿಗರ ಉಲ್ಲೇಖನಗಳಿಂದ ಈಗಿನಂತಯೇ ಆಗಲೂ ದಸರಾ ಹಬ್ಬವನ್ನು ಆಚರಿಸುತ್ತಿದ್ದುದು ತಿಳಿದು ಬರುತ್ತದೆ. ಈ ಹಬ್ಬದ ಬಗ್ಗೆ ಯಾವೊಂದು ನಿರ್ದಿಷ್ಟವಾದ ದಾಖಲೆ ಇಲ್ಲದಿದ್ದರೂ ನೂರುವರುಷದ ಹಿಂದಿನ ಒಬ್ಬ ಐರೊಪ್ಯ ಪ್ರವಾಸಿಗನ ಈ ಹಬ್ಬದ ವರ್ಣನೆಯಿಂದ ಇದು ತಿಳಿಯಬಹುದು. ಈ ಸಂಪ್ರದಾಯದ ಆಚರೆಣೆಯ ಬಗ್ಗೆ ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿನವರಿಗೆ ತಿಳಿಸುವುದು ನಮ್ಮ ದೇಶದ ಒಂದು ಗಟ್ಟಿಯಾದ ಸಂಪ್ರದಾಯ ವೆಂಬುದು ಖಚಿತ ಪಡಿಸುತ್ತದೆ.

ದೇವರಾಯ ವಿಜಯನಗರವನ್ನು ಆಳುತಿದ್ದ ಕಾಲದಲ್ಲಿ ( ಕ್ರಿ.ಶ. ೧೪೨೦),ಬಂದ ಇಟಲಿ ದೇಶದ Nicole Dei Conti  ಬರೆದ ಪ್ರವಾಸ ಕಥನದಿಂದ ಇದು ಪುಷ್ಟಿಗೊಂಡಿದೆ. ವಿಜಯನಗರದ ಎರಡನೆಯ ದೊರೆ ದೇವ ರಾಯ  ಈ ಪಾಂಡವರ ಹಬ್ಬವನ್ನು ಚಾಲ್ತಿಗೆ ತಂದರು. ಅವರು ಬಹಳ ಹೆಸರಾಂತ ಯೋಧ ಮಾತ್ರನಲ್ಲದೆ ಈ ಸಂಪ್ರದಾಯಿಕ ಹಬ್ಬವನ್ನು ಹೆಚ್ಚಿನ ಸಂಭ್ರಮ ಹಾಗು ವೈಭವದಿಂದ ಆಚರಿಸಲು ಪ್ರಾರಂಭಿಸಿ ತಮ್ಮ ಪ್ರಜೆಗಳ ಮನವನ್ನು ಗೆದ್ದರು.

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ  ಹಂಪಿಗೆ ,೧೪೪೩ ಬಂದ ಅಬ್ದುರ್ ರಾಝ್ಕ್  ಎಂಬ ಪರ್ಷಿಯನ್ ರಾಯಭಾರಿ ಈ ಹಬ್ಬವನ್ನು’ ಮಹಾನವಮಿ’ಎಂಬ ಪರ್ಯಾಯ ಕೊಟ್ಟ ರಲ್ಲದೆ ಇಂದಿಗೂ ಮೈಸೂರಿನ ದಸರಾ ಹಬ್ಬದ ಮುಖ್ಯ ಆಕರ್ಷಣೆಯಾದ ರತ್ನ ಸಿಂಹಾಸನವನ್ನ ವರ್ಣಿಸಿದ್ದಾರೆ. ಪೋಸ್ ಎಂಬ ಪೋರ್ಚುಗೀಸ್ ಪ್ರವಾಸಿಯೊಬ್ಬ ೧೫೨೦ಈ ಆಚರಣೆಯ ಸಮಯದಲ್ಲಿ ಹೇಗೆ ಮಹಾರಾಜರು ಜನರಿಗೆ ಬಿರುದು ಬಾವಲಿ ಗಳನ್ನೂ ಪ್ರಶಸ್ತಿಗಳನ್ನು ವಿಸ್ತರಿಸುತ್ತಿದ್ದರೆಂಬುದನ್ನು ಕಣ್ಣಾರೆ ಕಂಡು ವಿವರಿಸಿದ್ದಾನೆ.ಫ್ರಾನ್ಸಿಸ್ ಎಂಬ ಬಳ್ಳಾರಿ ಜಿಲ್ಲೆ  gazeteer ‘ ಮಹಾನವಮಿ ದಿಬ್ಬ’ ಅಥವ ‘ದಸರಾ ದಿಬ್ಬ’ ದಲ್ಲಿ ನವರಾತ್ರಿ /ದಸರಾ /ಮಹಾನವಮಿ ವಿಜೃಂಭಣೆಯಿಂದ ಹೇಗೆ ಆಚರಿಸುತಿದ್ದರು ಎಂದು ವರ್ಣಿಸಿದ್ದಾರೆ. ಪೆಸೊ ಇದನ್ನು ಹೌಸ್ of  ವಿಕ್ಟರಿ  ಎಂದು ಕರೆಯಲು ಕಾರಣವಿತ್ತು.೧೫೧೨ ಕೃಷ್ಣದೇವರಾಯರು ಯುದ್ಧದಲ್ಲಿ ಒರಿಸ್ಸಾ ರಾಜನನ್ನು ಪರಾಜಯ ಗೊಳಿಸಿ ಹಿಂದಿರುಗಿದಾಗ ಇದನ್ನು ಕಟ್ಟಿದ್ದು.

ವಿಜಯನಗರದ ಪತನದನಂತರ ಸಮಸ್ತ ಆಡಳಿತಾಧಿಕಾರ ರಾಜ ಒಡೆಯರಿಗೆ ಹಸ್ತಾಂತರವಾದಾಗ ರತ್ನಸಿಂಹಾಸನದ ಜೊತೆ ಎಲ್ಲ ಸಂಪ್ರದಾಯ ಆಚರಣೆಗಳು ಮೈಸೂರಿನ ರಾಜಧಾನಿಯಾದ ಶ್ರೀರಂಗಪಟ್ಟಣಕ್ಕೆ ವರ್ಗಾವಣೆಯಾಯಿತು. ಹಂಪಿಯಲ್ಲಿನಡೆಸಿದಂತಯೇ ಎಲ್ಲ ಆಚರೆಣೆಗಳು ವಿಧಿವತ್ತಾಗಿ ಮೈಸೂರು ರಾಜರೂ ನಡೆಸಿದರು. ಕಂಠೀರವ ನರಸರಾಜ ಒಡೆಯರ್ ೧೬೧೭ರಲ್ಲಿ ಆಚರಿಸುತ್ತಿದ್ದ ರೀತಿಯ ವಿವರಣೆಯನ್ನು ಸವಿಸ್ತಾರವಾಗಿ ‘ಕಂಠೀರವ ನರಸರಾಜ ವಿಜಯಂ‘(೧೬೪೮) ಎಂಬ ಪುಸ್ತಕದಲ್ಲಿ ಹೇಳಲಾಗಿದೆ.೧೭೬೧ ಇಂದ ೧೭೯೯ ಮೈಸೂರು ರಾಜ್ಯ ಆಳಿದ ಹೈದೆರ್ ಆಲಿ ಮತ್ತು ಟೀಪು ಸುಲ್ತಾನ್ ಕೂಡ ಈ ಸಂಪ್ರದಾಯ ನಡೆಸಿಕೊಂಡು ಬಂದರು.  ಈ ಆಚರಣೆಯ ವಿಧಿ ವಿಧಾನಗಳನ್ನು ದೇವಿ ಭಾಗವತ , ಪದ್ಮಪುರಾಣ ,ಭವಿಷ್ಯೋತ್ತರ ಪುರಾಣ ,ಮತ್ಸ್ಯ ಪುರಾಣ ,ಸೌರ ಪುರಾಣ ಹಾಗೂ ನಿರ್ಣಯ ಸಿಂಧು ಪುಸ್ತಕಗಳಿಂದ ಆರಿಸಿಕೊಳ್ಳಲಾಗಿದೆ.

೨೪ಅಡಿ ಚದುರದ ಒಂದು ಸ್ಥಳವನ್ನು ಸ್ವಚ್ಛಮಾಡಿ ಶುದ್ಧಿಗೊಳಿಸಿ ಒಂದು ಮಂಟಪ ಕಟ್ಟಿ ಅದರಲ್ಲಿ ಎರಡಡಿಯ ಪೀಠದ ಮೇಲೆ ಸರ್ವಾಲಂಕೃತವಾದ ದುರ್ಗಾ ಮಾತೆಯ ಪ್ರತಿಮೆಯನ್ನು ಸಿಂಹ ಲಾಂಛನದ ಆಸನದ ಮೇಲೆ ಸ್ಥಾಪಿಸಲಾಗುವುದು.

ನವರಾತ್ರಿಯ ಮೊದಲದಿನ ,ಅಂದರೆ,ಪಾಡ್ಯದಂದು,ಅರಸು ಮನೆತನದವರು ಕುಲದೈವವಾದ ಚಾಮುಂಡೇಶ್ವರಿ ಅಮ್ಮನವರನ್ನು ಪ್ರಾರ್ಥಿಸಿ,ಮಂಗಳಸ್ನಾನಮಾಡಿ, ಗಣಪತಿ ಪೂಜೆಯ  ನಂತರ ಕಂಕಣಧಾರಣೆ ಮಾಡುತ್ತಾರೆ. ತದನಂತರ ದರ್ಬಾರ ಹಾಲಿನಲ್ಲಿ ಸೆಜ್ಜೆ ಪೂಜೆ, ನವಗ್ರಹ ಪೂಜೆ,ಸಿಂಹಾಸನದ ಪೂಜೆಮಾಡಿ ಪಟ್ಟದ ಕತ್ತಿಹಿಡಿದು ಸಿಂಹಾಸನದ ಪ್ರದಕ್ಷಿಣೆ ನಂತರ ಮಹಾರಾಜರು ಸಿಂಹಾಸನಾರೂಢರಾಗುತ್ತಾರೆ.

ರಾಜಪುರೋಹಿತರು ಮಠಾಧಿಪತಿಗಳು ಆಶೀರ್ವದಿಸಿದನಂತರ ಸಾಮಂತರು ಮತ್ತು ರಾಜ್ಯಾಧಿಕಾರಿಗಳು  ತಮ್ಮ ಮುಜ್ರೆ ನಝರ್ ಗಳನ್ನೂ ಒಪ್ಪಿಸುತ್ತಾರೆ .ಆನೆಗಳ ಹಾಗೂ ಅಶ್ವಗಳ ಪೂಜೆ ನಡಯುತ್ತದೆ. ರಾಜಮನೆತನದ ಹೆಣ್ಣುಮಕ್ಕಳು ಸಿಂಹಾಸನಕ್ಕೆ ನಮಿಸುತ್ತಾರೆ.  ಮಹಾರಾಜರು ದರ್ಬಾರಿಗಳಿಗೆ  ಹೂವು ತಾಂಬೂಲ ನೀಡುತ್ತಾರೆ. ಅನಂತರ ರಾಜರು ಅರಮನೆಯ ಒಳಗೆ ಕುಲದೇವತೆಯ ಪೂಜೆ ನಡೆಸುತ್ತಾರೆ. ಒಂಬತ್ತು ದಿನವೂ ಸಂಜೆ ದರ್ಬಾರು ನಡೆಸುತ್ತಾರೆ.

ಏಳನೆಯ ದಿನ ಸರಸ್ವತಿ ಪೂಜೆ,ಎಂಟನೆಯ ದಿನ ಕಾಳರಾತ್ರಿ ಮಹಿಷಾಸುರಮರ್ದಿನಿ ಪೂಜೆ ನಡೆಯುತ್ತದೆ. ಒಂಬತ್ತನೆಯ ದಿನ ಆಯುಧ ಪೂಜೆ, ಲಕ್ಷ್ಮಿ ಪೂಜೆ ನಡೆಸಿ ಚಂಡಿ ಹೋಮವಾದ ನಂತರ ಕಂಕಣ ವಿಸರ್ಜನೆ ಮಾಡುತ್ತಾರೆ. ಅಂದಿನ ದಿನವೇ ರಾಜ್ಯದ  ಮುಖ್ಯಸ್ಥರು ಮತ್ತು ವಿದೇಶಿ ಅತಿಥಿಗಳನ್ನು ಹೂವಿತ್ತು ಗೌರವಿಸುತ್ತಾರೆ. ಈ ಪದ್ದತಿಯನ್ನು೧೮೦೫ ನಲ್ಲಿ  H. H. ಕೃಷ್ಣರಾಜ ಒಡೆಯರ್ (೩) ಪ್ರಾರಂಭಿಸಿದರು.

ಹತ್ತನೆಯ ದಿನವಾದ ವಿಜಯದಶಮಿಯಂದು ಶಸ್ತ್ರಾಸ್ತ್ರಗಳ ಪೂಜೆಯಾದನಂತರ ಅವುಗಳನ್ನು ಪಲ್ಲಕ್ಕಿಯಲ್ಲಿಟ್ಟು  ರಾಜರು ಕುದುರೆಯನ್ನೇರಿ ಬನ್ನಿ ಮಂಟಪಕ್ಕೆ ಹೊರಟ  ಮೆರವಣಿಗೆಯೊಡನೆ ಸ್ವಲ್ಪ ದೂರ ಜೊತೆಗಿದ್ದು ಕುಸ್ತಿ ವೀಕ್ಷಿಸಿ ಅರಮನೆಗೆ ತೆರಳುತ್ತಾರೆ. ಸುಮಾರು ೧ ಗಂಟೆಗೆ ಅಲಂಕೃತ ಆನೆಯ ಅಂಬಾರಿ ಯನ್ನೇರಿದ ಮಹಾರಾಜರ ಮೆರವಣಿಗೆ ಅರಮನೆಯಿಂದ ಹೊರಟು ಮೈಸೂರಿನ ಮಾರುಕಟ್ಟೆಯ ಮೂಲಕ ಬನ್ನಿ ಮಂಟಪ ತಲುಪುತ್ತದೆ. ಅಲ್ಲಿ ಸಮೀ ವೃಕ್ಷದ ಪೂಜೆ ನಂತರ ವಂಶದ ಹಿಂದಿನ ರಾಜರ ವೃತಾಂತವನ್ನು ಪುರೋಹಿತರಿಂದ ಕೇಳಿದ ಮೇಲೆ ಬನ್ನಿ ಎಲೆಗಳನ್ನು ಮುಖ್ಯಸ್ಥರಿಗೆ  ಪ್ರಸಾದವಾಗಿ  ವಿತರಿಸುತ್ತಾರೆ .ಮತ್ತೆ ಶಸ್ತ್ರಾಸ್ತ್ರವನ್ನು ಪಲಕ್ಕಿಯಲ್ಲಿ ಇರಿಸಿ ಆನೆ ಅಂಬಾರಿಯಲ್ಲಿ ಮಹಾರಾಜರ ಮೆರವಣಿಗೆ ಅರಮನೆ ಸೇರುತ್ತದೆ.  ಆ ದಿನ ಸಾದಾರಣ ರಾಜ್ಯದ ಎಲ್ಲೆಡೆ ವಿಶೇಷವಾಗಿ ಮೈಸೂರಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗುವುದು ಅಂದು

ಸಂಪ್ರದಾಯದ ಪೂಜೆ ಪುನಸ್ಕಾರಗಳ ಜೊತೆ ಜೊತೆಯಲ್ಲಿ ನೃತ್ಯ, ಸಂಗೀತ,ವಿವಿಧವಿನೋದಾವಳಿಗಳು, ಕ್ರೀಡೆಗಳು,ವಿವಿಧ ಉತ್ಪನ್ನಗಳ ಪ್ರದರ್ಶನ,ಅರಮನೆಗೆ ಅತ್ಯಂತ ಆಕರ್ಷಕ ದೀಪಾಲಂಕಾರ ಇರುತ್ತದೆ. ಇಡೀ ಮೈಸೂರಿಗೆ ಮೈಸೂರೇ ಅಲಂಕೃತವಾಗಿ ಕಣ್ಮನಗಳನ್ನು ತುಂಬುತ್ತದೆ. ಎಲ್ಲರ ಮನೆಯಲ್ಲೂ ಈ ಹಬ್ಬದ  ಆಚರೆಣೆ ನಡೆದು ಮನೆಗಳು,ಅಂಗಡಿಗಳು,ದೇವಸ್ಥಾನಗಳು ವಿಧವಿಧವಾದ ಬಣ್ಣದ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿರುತ್ತದೆ. ಇದನ್ನು ವೀಕ್ಷಿಸಲು ದೇಶ ವಿದೇಶಗಳಿಂದಲೂ ಜನ ಬಂದು ಸಂಭ್ರಮಿಸುತ್ತಾರೆ.

ಐತಿಹಾಸಿಕ  ಹಾಗು ಪೌರಾಣಿಕ ಮೂಲವಲ್ಲದೆ ಆಧ್ಯಾತ್ಮಿಕವಾಗಿಯೂ ಈ ಹಬ್ಬ ಪ್ರಸ್ತುತ. ಭೀಷ್ಮನ ಪ್ರಕಾರ ಒಬ್ಬ ನಿಷ್ಠಾವಂತ ಪ್ರಜಾಪೋಷಕ ರಾಜನಿಗೆ ದೇವತೆಗಳು ಕೂಡ ಹೆದರುತ್ತಾರೆ. ಇಡೀ ಬ್ರಹ್ಮಾಂಡ ಕಾರ್ಯ ನಿರತವಾಗಿದೆ ಸೂರ್ಯ,ಪೃಥ್ವಿ ,ನದಿ ಅಷ್ಟೇ ಏಕೆ ದೇವಲೋಕದ ಇಂದ್ರನೂ ಸೇರಿದಂತೆ  ಕಾರ್ಯದಿಂದ ತಮ್ಮ ಘನತೆ ಮತ್ತು ಸ್ಥಾನ ಪಡೆದಿದ್ದರೆ. ಅಂತಯೇ ಮಾನವನಿಗೂ ಕರ್ಮದಿಂದಲೇ ಮುಕ್ತಿ ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾನೆ. ಈ ದಸರಾ ಹಬ್ಬದ ಮಹತ್ವ ಮಾನವನ ಷಡ್ರಿಪುವಿನ ಸಂಹಾರ , ಅವನ ನಡೆ   ಅಜ್ಞಾನದಿಂದ  ಜ್ಞಾನದೆಡೆಗೆ ಮತ್ತು ಐಹಿಕದ ಮೇಲೆ ಅಧಮ್ಯ ಚೇತನದ ವಿಜಯೆ.ಮಾನವ ಜನ್ಮ ವಿಕಸಿಸಗೊಂಡು ಧರ್ಮ ಶಾಶ್ವತ ನೆಲೆಗೊಳ್ಳುತದೆ.

ಭಗವದ್ಗೀತೆ ೧೧,೧೮.

“More contents on the Wadiyars  will be Updated Soon”

ಒಡೆಯರ್ ವಂಶದ ಅರಸರು

1399 AD

wadiyarsofmysore

ಯದುರಾಯ

Birth: 1371, C.E.
Reign: 1399-1423 C.E.

wadiyarsofmysore

ಚಾಮರಾಜ ಒಡೆಯರ್ I

Birth: ​ ​1408, ​ ​C.E.
Reign:
​ ​1423-1459 ​ ​C.E.

wadiyarsofmysore

​ತಿಮ್ಮರಾಜ ​ ​ಒಡೆಯರ್

Birth: ​ ​1433, ​ ​C.E.
Reign:
​ ​1459-1478 ​ ​C.E.

wadiyarsofmysore

ಹಿರಿಯ ​ ​ಚಾಮರಾಜ ​ ​ಒಡೆಯರ್ ​ ​II

Birth: ​ ​1463, ​ ​C.E.
Reign:
​ ​1478-1513 ​ ​C.E.

wadiyarsofmysore

ಹಿರಿಯ ​ ​ಬೆಟ್ಟದ ​ ​ಚಾಮರಾಜ ​ ​ಒಡೆಯರ್  III

Birth: ​ ​1492, ​ ​C.E.
Reign:
​ ​1513-1553, ​ ​C.E.

wadiyarsofmysore

ತಿಮ್ಮರಾಜ ​ ​ಒಡೆಯರ್ ​ ​II

Birth: ​ ​1511, ​ ​C.E.
Reign:
​ ​1553-1572, ​ ​C.E.

wadiyarsofmysore

ಬೋಲ ​ ​ಚಾಮರಾಜ ​ ಒಡೆಯರ್ ​ ​IV

Birth: ​ ​1518., ​ ​C.E.
Reign:
​ ​1572-1576 ​ ​C.E.

wadiyarsofmysore

​ಬೆಟ್ಟದ ​ ​ಚಾಮರಾಜ ​ ಒಡೆಯರ್ ​ ​V

Birth: ​ ​1550, ​ ​C.E.
Reign:
​ ​1576-1578 ​ ​C.E.

wadiyarsofmysore

ರಾಜ ಒಡೆಯರ್ ​ ​I

Birth: ​ ​1552, ​ ​C.E.
Reign:
​ ​1578-1617 ​ ​C.E.

wadiyarsofmysore

​ ​ಚಾಮರಾಜ ಒಡೆಯರ್ ​ ​VI

Birth: ​ ​1606, ​ ​C.E.
Reign:
​ ​1617-1637 ​ ​C.E.

wadiyarsofmysore

ರಾಜ ಒಡೆಯರ್ ​ ​II

Birth: ​ ​1617, ​ ​C.E.
Reign:
​ ​1637-1638 ​ ​C.E.

wadiyarsofmysore

​ ​ರಣಧೀರ ​ ​ಕಂಠೀರವ ​ ​ನರಸರಾಜ ​ ​ಒಡೆಯರ್​ ​I

Birth: ​ ​1615, ​ ​C.E.
Reign:
​ ​1638-1659, ​ ​C.E.

wadiyarsofmysore

​ದೊಡ್ಡ ದೇವರಾಜ ​ ​ಒಡೆಯರ್

Birth: ​ ​1627, ​ ​C.E.
Reign:
​ ​1659-1673, ​ ​C.E.

wadiyarsofmysore

ಚಿಕ್ಕ ದೇವರಾಜ ​ ​ಒಡೆಯರ್

Birth: ​ ​1645, ​ ​C.E.
Reign:
​ ​1673-1704, ​ ​C.E.

wadiyarsofmysore

​ ಕಂಠೀರವ ​ ​ನರಸರಾಜ ​ ​ಒಡೆಯರ್ ​ ​II

Birth: ​ ​1673, ​ ​C.E.
Reign:
​ ​1704-1714, ​ ​C.E.

wadiyarsofmysore

ದೊಡ್ಡ ಕೃಷ್ಣರಾಜ ​ಒಡೆಯರ್  I

Birth: ​ ​1702, ​ ​C.E.
Reign:
​ ​1714-1732, ​ ​C.E.

wadiyarsofmysore

​ಬೆಟ್ಟದ ​ ​ಚಾಮರಾಜ ​ ಒಡೆಯರ್ ​ ​VII

Birth: ​ ​1704, ​ ​C.E.
Reign:
​ ​1732-1734, ​ ​C.E.

wadiyarsofmysore

​ ಕೃಷ್ಣರಾಜ​ ಒಡೆಯರ್ ​ ​II

Birth: ​ ​1728, ​ ​C.E.
Reign:
​ ​1734-1766, ​ ​C.E.

wadiyarsofmysore

ನಂಜರಾಜ ಒಡೆಯರ್

Birth: ​ ​1748, ​ ​C.E.
Reign:
​ ​1766-1770, ​ ​C.E.

wadiyarsofmysore

​ಬೆಟ್ಟದ ​ ​ಚಾಮರಾಜ ​ ಒಡೆಯರ್ ​ ​VIII

Birth: ​ ​27th ​ ​August, ​ ​1759, ​ ​C.E.
Reign:
​ ​1770-1776, ​ ​C.E.

wadiyarsofmysore

​ಖಾಸಾ ​​ಚಾಮರಾಜ ​ಒಡೆಯರ್ ​ ​IX

Birth: ​ ​28th ​ ​February, ​ ​1774, ​ ​C.E.
Reign:
​ ​1776-1796, ​ ​C.E.

wadiyarsofmysore

​ಕೃಷ್ಣರಾಜ ​ಒಡೆಯರ್ ​III

Birth: ​ ​14th ​ ​July, ​ ​1794, ​ ​C.E.
Reign:
​ ​1799-1868, ​ ​C.E.

wadiyarsofmysore

​ಚಾಮರಾಜ ​ ಒಡೆಯರ್ ​ ​X

Birth: ​ ​22nd ​ ​February, ​ ​1863, ​ ​C.E.
Reign:
​ ​1868-1894

wadiyarsofmysore

​ಕೃಷ್ಣರಾಜ ​ಒಡೆಯರ್​ ​IV

Birth: ​ ​4th ​ ​June, ​ ​1884, ​ ​C.E.
Reign:
​ ​1895-1940, ​ ​C.E.

wadiyarsofmysore

ಜಯಚಾಮರಾಜ ​ಒಡೆಯರ್

Birth: ​ ​18th ​ ​July, ​ ​1919, ​ ​C.E..
Reign:
​ ​1940-1947, ​ ​C.E.
Constitutional
​ ​Monarchy ​ ​1947-1950, ​ ​C.E.
Titular
​ ​Monarchy ​ ​​ ​1950-1974, ​ ​C.E.

wadiyarsofmysore

ಶ್ರೀಕಂಠ​ದತ್ತ ​ ​ನರಸಿಂಹರಾಜ ​ಒಡೆಯರ್

Birth: ​ ​19th ​ ​February, ​ ​1953, ​ ​C.E.
Titular
​ ​Monarchy ​ ​1974-2013 ​ ​, ​ ​C.E.

ykcwadiyar

ಯಡುವೀರ್ ​ ​ಕೃಷ್ಣದತ್ತ ​ ​ಚಾಮರಾಜ ​ಒಡೆಯರ್

Birth: ​ ​24th ​ ​March, ​ ​1992 ​ ​C.E.
Titular
​ ​Monarchy ​ ​2015-present

coat-of-arms-mysore-wadiyars

ಮೈಸೂರು ರಾಜ್ಯ ಗೌರವ ಲಾಂಛನ

ಮೈಸೂರು ರಾಜ್ಯ ಗೌರವ ಲಾಂಛನ ವಿನ್ಯಾಸ ಮಾಡಿದವರು ಶ್ರೀ ರಾಬರ್ಟ್ ಟೇಲರ್ .ಅವರು Cambridge  ಯೂನಿವೆರ್ಸಿಟಿಯ ಸ್ನಾತಕೋತ್ತರ ಪದವೀಧರರು.  ಅವರು ಬ್ರಿಟಿಷ್ ಆಡಳಿತದ  ಬಂಗಾಳ ಸರ್ಕಾರಿ ಇಲಾಖೆ ಯಲ್ಲಿ ನೌಕರಿಯಲ್ಲಿದ್ದರು. ೧೮೭೭ದಿಲ್ಲ್ಲಿ ದರ್ಬಾರ್ ನಲ್ಲಿ ಮೊಟ್ಟಮೊದಲುಈ ಲಾಂಛನವನ್ನು ಮಾಂಡಿಸಿದರು

ಗಂಡಭೇರುಂಡ-  ಈ ಲಾಂಛನದ ಮದ್ಯ ಇದೆ . ಈ ಪೌರಾಣಿಕ ಪಕ್ಷಿ ಒಡೆಯರ ಪರ್ಯಾಯ ಪದವಿದ್ದಂತಿದೆ

ಈ ಪಕ್ಷಿಗೆ ಎರಡು ತಲೆಗಳಿದ್ದು ಅದು ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದು ಅದು “ನ್ಯಾಯ ಮತ್ತು ಜಾಗೃತಿ”ಸಂಕೇತಗಳು ಸ್ವತ್ತಾಯಿತ್ತು.

ಈ ಚಿನ್ಹೆಯನ್ನು ವಿಜಯನಗರ ಸಾಮ್ರಾಜ್ಯದ ನಂತರದ ಅರಸು ಅಚ್ಚುತ ರಾಯರು ತಮ್ಮ ನಾಣ್ಯಗಳಲ್ಲಿ ಟಂಕಿಸುತಿದ್ದರು ಎಂಬ ಪ್ರತೀತಿ ಇದೆ ಅದರಲ್ಲಿ ಈ ಪಕ್ಷಿ ತನ್ನಎರಡು  ತೋಳು ಮತ್ತು ಕೊಕ್ಕಿನಲ್ಲಿ  ಒಂದೊಂದು  ಆನೆ ಯನ್ನು ಹಿಡಿದಿದೆ. ವಿಜಯನಗರ ಸಾಮ್ರಾಜ್ಯದ ನಂತರ ಮಿಕ್ಕ ಎಲ್ಲ ಸಂಪ್ರದಾಯ ಪದ್ಧತಿಯೊಂದಿಗೆ ಈ ಚಿನ್ಹೆ  ಮೈಸೂರು ಸಂಸ್ಥಾನದ ಸ್ವತ್ತಾಯಿತ್ತು

ನ್ಯಾಯ ಮತ್ತು ಜಾಗೃತಿ ಸಂಕೇತವಾದ ಈ ತಲೆಗಳು ಎಂದೂ  ನಿದ್ರಿಸದೆ ಎಚ್ಚರದಿಂದ ಕಾಪುಡುತ್ತದೆ  ಯಂದರ್ಥ.  ತಲೆಗಳು ಒಂದೊಂದು ಶರಭವನ್ನು  (ಆನೆ ತಲೆಯ ಸಿಂಹ)ಹಿಡಿದಿದೆ ಇದರ ಅರ್ಥ ಅತಿಯಾದ ಶಕ್ತಿ ಮತ್ತು ಶೌರ್ಯಯಂದು ಶಿಖರದಲ್ಲಿ ಒಂದು ರಾಜಗಾಂಭೀರ್ಯದ  ಸಿಂಹ  ಅದರ ಬಾಯಲ್ಲಿ ಮಹಿಷನ ತಲೆ ಹಿಡಿದಿದೆ. ರಾಜಕುಲದೇವತೆ ಶ್ರೀ  ಚಾಮುಂಡೇಶ್ವರಿ ದೇವಿ  ದುಷ್ಟಅಸುರ ಮಹಿಷನ ಮರ್ದಿಸಿದ  ವಿಜಯದ ಸಂಕೇತ. ಕೆಳಗಿನಬಾಗದಲ್ಲಿ “ ಸತ್ಯಮೇವ   ಉದ್ದರಾಮ್ಯಹಮ್ ” ಅಂದರೆ ಸತ್ಯ ಮಾತ್ರ ಸಮರ್ಥಿಸುತ್ತೆನೆ ಎಂದರ್ಥ . ಈ ಪ್ರತ್ಯೇಕ ಅಂಶಗಳನ್ನು ಬಳ್ಳಿ  ಮತ್ತು ಲತೆಗಳು  ಬಂಧಿಸಿದೆ. ಈ ರಾಜದ್ವಜ  ಕೆಂಪು ಮತ್ತು ಕಂದು ಬಣ್ಣ ಹೊಂದಿರುತ್ತದೆ .ಏಕೆ ಕೆಂಪು ಅನ್ನುವುದಕ್ಕೆ ಒಂದು ಸ್ವಾರಸ್ಯಕರ ಹಿನ್ನಲೆ ಇದೆ .ಒಮ್ಮೆ ಮೈಸೂರು ಅರಸರು ತಮ್ಮ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟಾಗ ದಾರಿಯಲ್ಲಿ ಸಿಕ್ಕ ಜಂಗಮರೊಬ್ಬರು ಅವರಿಗೆ ಒಂದು ಕೆಂಪು ತುಣುಕು ಕೊಟ್ಟರಂತೆ . ಯುದ್ಧದ ಗೆಲುವಿಗೆ  ಆ ಜಂಗಮರ ಆಶೀರ್ವಾದ ಕಾರಣ  ಎಂದು ನಂಬಿದ ಅರಸರ ಇಚ್ಛೆಯಂತೆ  ನಮ್ಮ   ರಾಜ ಧ್ವಜದಲ್ಲಿ ಕೆಂಪು ಬಣ್ಣವು  ರಾರಾಜಿಸತೊಡಗಿತು

 

Share on

Join Our News Letter



To Contact  YKC Wadiyar

Click this button below and send your message.

The Palace,
Mysore – 570001

The Bangalore Palace,
No.1, Palace Road,Vasanthnagar,
Bangalore – 560052

Get In Touch

error: Content is protected !!