ykcw

ಯದುವೀರ್ ಕೃಷ್ಣದತ್ತ  ಚಾಮರಾಜ ಒಡೆಯರ್ ಮೈಸೂರು ರಾಜವಂಶದ ಪ್ರಸ್ತುತ ೨೭ನೇ ಉತ್ತರಾಧಿಕಾರಿ ಮತ್ತು ಪಾಲಕರು ಅವರು ಬೆಟ್ಟದ ಕೋಟೆ ಅರಸು ಕುಲಕ್ಕೆ ಸೇರಿದ  H.H ರಾಜಮಾತೆ ಡಾ . ಪ್ರಮೋದ ದೇವಿ  ಒಡೆಯರ್ ಮತ್ತು ದಿ. ಡಾ . ಶ್ರೀಕಂಠ ದತ್ತ ಒಡೆಯರ್ ಅವರ ಏಕೈಕ ಪುತ್ರ . ಇವರ ತಾತ H.H . ಡಾ .ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಮತ್ತು ಅಜ್ಜಿ  ತ್ರಿಪುರಸುಂದರಮ್ಮಣ್ಣಿ ಅವರು.

Y. K. C.ಒಡೆಯರ್ ತಮ್ಮ ಪ್ರಾಥಮಿಕ ಶಿಕ್ಷಣ ಬೆಂಗಳೂರಿನ, ವಿಧ್ಯಾ ಸಾಗರ ಶಾಲೆಯಲ್ಲಿ ಮುಗಿಸಿ ೧೦ನೇ ತರಗತಿ (I. C.S.E. )ಸರ್ಟಿಫಿಕೇಟ್  ವಿಧ್ಯಾ ನಿಕೇತನ ಶಾಲೆಯಿಂದ ಪಡೆದರು .I.B. ಡಿಪ್ಲೋಮ,ಬೆಂಗಳೂರಿನ  ಕೆನಡಿಯನ್ ಇಂಟರ್ನ್ಯಾಷನಲ್ ಶಾಲೆಯಿಂದ ಪಡೆದಮೇಲೆ ಅವರು ತಮ್ಮ ಉನ್ನತ ಶಿಕ್ಷಣಕ್ಕೆ ಅಮೆರಿಕಾಗೆ ತೆರಳಿದರು . ಮೇ ೨೦೧೫ರಲ್ಲಿ  ಇಂಗ್ಲಿಷ್ ಮತ್ತು  ಅರ್ಥಶಾಸ್ತ್ರ ಪ್ರಧಾನ  ವಿಷಯವಾಗಿ ತಮ್ಮ ಕಲೆಯ ಪದವಿ University of Massachusetts,Amherst,U. S . A. ಇಂದ ಪಡೆದು ಹಿಂತಿರುಗಿದರು .

ಪ್ರತಿಷ್ಠಿತ ಮೈಸೂರು ರಾಜವಂಶಜರಾದ ಅವರು ೬೦೦ವರ್ಶದ ಡೆಕ್ಕನ್ ಪ್ರಸ್ತಭೂಮಿಯಲ್ಲಿನ ಒಡೆಯರ್ ಕುಲದ  ಪರಂಪರೆ ಮತ್ತು ಸಂಸ್ಕೃತಿಯನ್ನುಪಾಲಿಸಲು ಸಮರ್ಥರು.ಅಲ್ಲದೆಈ ನಾಡಿಗೆ ತಮ್ಮ ಪೂರ್ವಿಕರ ಕೊಡುಗೆಯಿಂದ ಪ್ರೇರಿತರಾಗಿ  ಸುಸ್ಥಿರ ಅಭಿವ್ರಿದ್ಧಿ ಮತ್ತು ಶಿಕ್ಷಣ ವ್ಯವಸ್ಥೆಯ ಪರಿಹಾರಕ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ .

ಅವರು ರಾಜಸ್ತಾನದ ದುಂಗಾರ್ಪುರ್ ರಾಜಕುಮಾರಿ ತ್ರಿಶಿಕಾ ದೇವಿ ಒಡೆಯರನ್ನು ಮದುವೆಯಾಗಿದ್ದಾರೆ.

 

ykcwadiyar-childhood

ಹುಟ್ಟು ಮತ್ತು  ಜೀವನ ವೃತ್ತಾಂತ

ಯದುವೀರ ಕೃಷ್ಣದತ್ತ ಚಾಮರಾಜ  ಒಡೆಯರ್ ಅವರ ಹುಟ್ಟಿದ್ದು ೧೯೯೨ ಮಾರ್ಚ್ ೨೪“ಯದುವೀರ ಗೋಪಾಲರಾಜ ಅರಸ್” ಎಂಬ ನಾಮದ್ಯೆಯದಿಂದ. ಶ್ರೀಮತಿ ತ್ರಿಪುರಸುಂದರಿ ದೇವಿ ಮತ್ತು “ ಬೆಟ್ಟದ ಕೋಟೆ” ವಂಶದ ಶ್ರೀ  ಸ್ವರೂಪ ಗೋಪಾಲರಾಜ್ ಅರಸ್  ಇವರ ಜನ್ಮವಿತ್ತ ಪಾಲಕರು .

 ತಂದೆ ಕಡೆಯಹಿನ್ನಲೆ: ‘ಬೆಟ್ಟದ ಕೋಟೆ ಕುಲ’ ,ಗುಂಡ್ಲು ಪೇಟೆ ತಾಲೂಕಿನ  ಗೋಪಾಲಸ್ವಾಮಿ ಬೆಟ್ಟದ ಮೇಲಿರುವ  ಸಣ್ಣ  ಕೋಟೆಯಿಂದ  (ಈಗ ಜೀರ್ಣಾವಸ್ಥೆಯಲ್ಲಿದೆ ) ಬಂದವರು. ಇಂದಿಗೂ  ಕುಲ ದೇವರಾದ” ಹಿಮವದ್ ಗೋಪಾಲಸ್ವಾಮಿ”ಯ ಸಾವಿರಾರು ಭಕ್ತರು ಬಂದು ಆಶೀರ್ವಾದ ಪಡೆಯುತ್ತಾರೆ .ಅಂದಹಾಗೆ, H.H ಕೃಷ್ಣರಾಜ ಒಡೆಯರ್ (೩) ಅವರ ದತ್ತು ಪುತ್ರ  H. H ಚಾಮರಾಜ  ಒಡೆಯರ್ (೧೦) ಅವರು ಈ ಕುಲದವರು .ಯದುವೀರ್ ಒಡೆಯರ್ ಅವರ ಪೂರ್ವಿಕರಾದ   ಯುವರಾಜ ಸುಬ್ರಮಣ್ಯ ರಾಜ್ ಅರಸ್ ಅವರು ಚಾಮರಾಜ  ಒಡೆಯರ್ ಅವರ ಅಣ್ಣನವರು .

ತಾಯಿಕಡೆಯ ಹಿನ್ನಲೆ : ಇತ್ತ Y .K .C ಒಡೆಯರ್ ಅಜ್ಜಿ ರಾಜಕುಮಾರಿ ಗಾಯತ್ರಿ ದೇವಿಯವರು ಮೈಸೂರು ಅರಸರಾದ H.H ಡಾ. ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರ ಹಿರಿಯ ಪುತ್ರಿ ಮತ್ತು ದಿ .ಶ್ರೀಕಂಠದತ್ತ ಒಡೆಯರ್ ಅವರ ಅಕ್ಕನವರು ತಂದೆಯಂತೆ ರಾಜಕುಮಾರಿ ಗಾಯತ್ರಿ ದೇವಿಯವರು ಸಂಗೀತ ರಸಜ್ಞೆ ಮತ್ತು ಅಪಾರ ಜನರ ಪ್ರೀತಿ ಗಳಿಸಿದ್ದರು.

ಅವರ ಪತಿ ಸರ್ದಾರ ಕೆ. ಬಿ ರಾಮಚಂದ್ರ ರಾಜ ಅರಸ್ ರಾಜಕುಮಾರಿ ಲೀಲಾವತಿ ಅವರ ದತ್ತು ಪುತ್ರ .ರಾಜಕುಮಾರಿ ಲೀಲಾವತಿ ಯವರು ಮೈಸೂರಿನ ದಿವಾನರಾಗಿದ್ದ ಸರ್ದಾರ್ M .ಕಾಂತರಾಜ ಅರಸ್ ಮತ್ತು ಮಹಾರಾಜಕುಮಾರಿ ಜಯಲಕ್ಷಮ್ಮಣಿ (ನಾಲ್ವಡಿ ಕೃಷ್ಣರಾಜ ಒಡೆಯರ ಸಹೋದರಿ )ಅವರ ಸುಪುತ್ರಿ.

ವಿದ್ಯಾಭ್ಯಾಸ

ಪ್ರಾಥಮಿಕ ಶಿಕ್ಷಣ ವಿದ್ಯಾ ಸಾಗರ ಶಾಲೆ ,ಬೆಂಗಳೂರು

I C.S.E. (೧೦ ತರಗತಿ )ವಿದ್ಯಾ ನಿಕೇತನ ಶಾಲೆ ,ಬೆಂಗಳೂರು .-ಮಾರ್ಚ್ ೨೦೦೮.

I B.ಡಿಪ್ಲೋಮ ದಿ ಕೆನಡಿಯನ್ ಇಂಟರ್ನ್ಯಾಷನಲ್ ಶಾಲೆ ಬೆಂಗಳೂರು -ಮೇ ೨೦೧೦

B.A.( ಇಂಗ್ಲಿಷ್ ಮತ್ತು ಅರ್ಥಶಾಸ್ತ್ರ ಪ್ರದಾನ ವಿಷಯಗಳಾಗಿ ),ಮೇ ೨೦೧೫ ,University of Massuchesetts,Amherst,U. S. A.

ykcwadiyar-education
ykcwadiyar-adoption

ದತ್ತು ಸ್ವೀಕಾರ ಮತ್ತು ಪಟ್ಟಾಭಿಷೇಕ

ರಾಜಮಾತೆ H. H  ಡಾ .ಪ್ರಮೋದ ದೇವಿ ಒಡೆಯರ್,ದಿ :ಶ್ರೀಕಂಠದತ್ತ ಒಡೆಯರ್ ಅವರ ಧರ್ಮಪತ್ನಿ, Y. K. C ಅವರು ಅಮೇರಿಕಾದಲ್ಲಿ ಕೊನೆಯ ಸೆಮಿಸ್ಟರ್ನಲ್ಲಿ ಓದುತ್ತಿರುವಾಗ ಅವರನ್ನು ೨೩ ಫೆಬ್ರವರಿ ೨೦೧೫ ರಂದು ಶಾಸನಬದ್ದವಾಗಿ ದತ್ತು ಸ್ವೀಕರಿಸಿದರು . ಅನುಸಾರವಾಗಿ ಅವರ ಹೆರಸು  ” ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್”ಎಂದಾಯಿತು . ತದನಂತರ Y .K.C. ಶಿಕ್ಷಣ ಪೂರೈಸಲು ಅಮೆರಿಕಾಗೆ ತೆರಳಿದರು .

ಪದವಿ ಪಡೆದು ಹಿಂದಿರುಗಿದಮೇಲೆ ಮೇ ತಿಂಗಳ ೨೮ನೇ ತಾರೀಖು ೨೦೧೫ ರಂದುಅರಮನೆಯಲ್ಲಿ  ಅವರ  ಪಟ್ಟಾಭಿಷೇಕ ಭರ್ಜರಿಯಿಂದ ನೆರವೇರಿತು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ೨೭ನೇ ಉತ್ತರಾಧಿಕಾರಿಯಾಗಿ ನೇಮಿತಗೊಂಡು ಸಾಂಪ್ರದಾಯಿಕವಾಗಿ ಜವಾಬ್ದಾರಿ ಸ್ವೀಕರಿಸಿದರು.

ಮೈಸೂರು ರಾಜವಂಶದ  ಉತ್ತರಾಧಿಕಾರಿಯಾಗಿ ಅವರ ಪಾತ್ರ ಮತ್ತು ಜವಾಬ್ದಾರಿಗಳು

ಪ್ರಸ್ತುತ ಒಡೆಯರ್ ರಾಜವಂಶದ ೨೭ನೇ ಕುಡಿಯಾಗಿ ಮೈಸೂರು ಮತ್ತು ಅದರ ಸುತ್ತುಮುತ್ತಿನ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.  ಮೊದಲೆನೆಯದಾಗಿ ,ಮೈಸೂರಿನ ಜಯಚಾಮರಾಜೇಂದ್ರ ಅರಸು ಶಿಕ್ಷಣ ಪ್ರತಿಷ್ಠಾನ  ಮತ್ತು ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯ ಧರ್ಮದರ್ಶಿಯಾಗಿ ನಂತರ ಅವರು  ಕಳಿಸು ಪ್ರತಿಷ್ಠಾನದ ಸಲಹೆಗಾರರು ಅಲ್ಲದೆ ಸ್ವಚ್ಛ ಭಾರತ ಅಭಿಯಾನದ ರಾಯಭಾರಿ.ಇವರ ರಾಯಭಾರದಲ್ಲೇ ಮೈಸೂರು  ಅತಿ ಸ್ವಚ್ಛ ನಗರ ಎಂದು ಎರಡು ಬಾರಿ ಪ್ರಶಸ್ತಿ ಪಡೆದಿದೆ.

ykcwadiyar-roles and responsibilities
ykcwadiyar-public life

ಸಾರ್ವಜನಿಕ ಜೀವನ

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ವಾಭಾವಿಕ ನಾಯಕತ್ವ ಉಳ್ಳವರು .೨೭ ನೇ ರಾಜವಂಶದ ಪಾಲಕರಾಗಿ ಪ್ರತಿಹೆಜ್ಜೆಯಲ್ಲೂ ಅನುಭವ ಮತ್ತು ಪ್ರಭುತ್ವ ಗಳಿಸಲು ಇಚ್ಛಿಸುತ್ತಾರೆ ಅವರ ಕರ್ತವ್ಯ ,ಹೊಣೆಗಳು ಮತ್ತು ಜವಾಬ್ಧಾರಿಗಳು ಬಹುಪಾಲು ಸಾರ್ವಜನಿಕ ವ್ಯಾಪ್ತಿ ಯಲ್ಲಿ ಇದೆ .ಸ್ವತಃ ಆದ್ಯಾತ್ಮಿಕ ಪ್ರಜ್ಞೆಯುಳ್ಳ ಶ್ರೀ ಯದುವೀರ ಒಡೆಯರು  ಪಾರಂಪರಿಕವಾಗಿ ರಾಜವಂಶಕ್ಕೆ ಬಂದ ಆಧ್ಯಾತ್ಮಿಕ ,ಧಾರ್ಮಿಕ ,ಸಾಮಾಜಿಕ ,ಕಲೆ,ಕ್ರೀಡೆ ಮತ್ತು ಸಂಸ್ಕೃತಿಕ ಕ್ಷೇತ್ರಗಳಲ್ಲಿ ಭಾಗವಿಸುವರು ಇವರ ಪೂರ್ವಿಕರ ಕೊಡುಗೆ ಶಿಕ್ಷಣ ,ಸಾಮಾಜಿಕ ಮತ್ತು ಆರ್ಥಿಕ  ಕ್ಷೇತ್ರಗಳಿಗೆ ಅಪಾರ ಅಂತೆಯೇ ಕಲೆ ಮತ್ತು ಕ್ರೀಡಾ ಕ್ಷೇತ್ರದ ಪೋಷಕರು .  ಯದುವೀರ ಒಡೆಯರ್ ಅವರ .ಈ ಪಾರಂಪಾರಿಕ ಕ್ಷೇತ್ರದಲ್ಲಿನ ಆಸಕ್ತಿ ಮತ್ತು ಉತ್ಸಾಹ ಕರ್ನಾಟಕ ಜನತೆಯೊಂದಿಗೆ ಬಾಂಧವ್ಯ ಬೆಸಗಿದೆ.. ಅವರ ಶಿಕ್ಷಣ ,ಸಾಮಾಜಿಕ ಅರಿವು ಪರಿಸರ ಪ್ರೇಮ ಮತ್ತು ಕೌಶಲ್ಯ ಜನತೆಗೆ ಭರವಸೆ ನೀಡಿದೆ ಅವರು  ಶಿಕ್ಷಣಕ್ಷೇತ್ರ  ಮತ್ತು ಪರಿಸರ ರಕ್ಷಣೆಗೆ ಪ್ರಾಮುಖ್ಯತೆ ನೀಡುತ್ತಾರೆ.ಅವರು ಸಕ್ರಿಯವಾಗಿ ಭಾಗಗೊಂಡದಲ್ಲದೆ  ಅವರ ರಾಯಬಾರದಲ್ಲಿ ಕೇಂದ್ರೀಯ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ” ಮೈಸೂರು  ಅತಿ ಸ್ವಚ್ಛ ನಗರ” ಎಂಬ ಪಟ್ಟ ಎರಡು ಬಾರಿ ಗಳಿಸಿತು.

ಅವರು ಕಳಿಸು ಪ್ರತಿಷ್ಠಾನದ ಪೋಷಕರು ಇದು ಹಳೆ ಮೈಸೂರು ಪ್ರಾಂತ್ಯದ ೫೮೮೦ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯಗಳನ್ನು ಒದಗಿಸುತ್ತದೆ ಅಲ್ಲದೆ ಮೈಸೂರಿನ ಶಾಲೆಗಲ್ಲಿ ” ಮಹಾರಾಜನಿಂದ ಕಲಿ “ಎಂಬ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ .

ಖಾಸಗಿ ಬದುಕು

ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ  ರಾಜಕುಮಾರಿ ತ್ರಿಶಿಕಾ ದೇವಿ ಒಡೆಯರ್ ಅವರು. ತ್ರಿಶಿಕಾ ದೇವಿ ಅವರು ರಾಜಸ್ಥಾನದ ದಂಗರ್ಪುರ್ ರಾಜವಂಶಕ್ಕೆ ಸೇರಿದವರು .ಅವರು ಬಾಲ್ದ್ವಿನ್ಸ್ ಗರ್ಲ್ಸ್ ಹೈ ಸ್ಕೂಲ್ ಬೆಂಗಳೂರು ನಲ್ಲಿ  ತಮ್ಮ (೧೦ನೇ ತರಗತಿ )I.C.S.E ಮುಗಿಸಿ ಬೆಂಗಳೂರಿನ  ಜ್ಯೋತಿ ನಿವಾಸ್ ಕಾಲೇಜನಿಂದ ಪದವಿ ಪಡೆದರು .ಅವರು ತಮ್ಮ ಸ್ನಾತಕೋತ್ತರ ಪದವಿ (ಅರ್ಥಶಾಸ್ತ್ರದಲ್ಲಿ )  ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಿಂದ ಸ್ವೀಕರಿಸಿದರು .

about ykc wadiyar Personal life
ykcwadiyar-hobbies

ಹವ್ಯಾಸಗಳು

ಯದುವೀರ ಒಡೆಯರ್ ಅವರು ಬಹುಮುಖಿ, ರಾಜವಂಶಕ್ಕೆ ತಕ್ಕ ಕುಡಿ .ಅವರಿಗೆ ಓದುವ,ಶಾಸ್ತ್ರೀಯ ಸಂಗೀತ(ಕರ್ನಾಟಕ ಶೈಲಿ ಮತ್ತು ಪಾಶ್ಚತ್ಯ )  ಮತ್ತು ಕ್ರೀಡೆಯ ಹವ್ಯಾಸಗಳು ಇವೆ. ಚಿಕ್ಕವಯಸ್ಸಿನಲ್ಲಿ” ಸರಸ್ವತಿ ವೀಣೆ” ಕಲಿತ ಫಲ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಬುನಾದಿ ಆಯಿತು .ಅವರ ಪ್ರಾಯದಲ್ಲಿ ಗಿಟಾರ್ ಕಲಿತು ಪಾಶ್ಚಾತ್ಯ ಸಂಗೀತದ ಕಡೆ ( ಎಲ್ಲ ಬಗೆಯ ಅಂದರೆ jazz ,blues ,rock ) ಮನ ಒಲಿಯಿತು ಓದುವ ಅಭ್ಯಾಸ ಬರಿ ಭಾರತದ ಇತಿಹಾಸ ಮತ್ತು ಡೆಕ್ಕನ್ ಪ್ರಸ್ಥಭೂಮಿ ಯನ್ನು ಆಳಿದ ಸಾಮ್ರಾಜ್ಯಗಳಿಗೆ ಸೀಮಿತಗೊಳ್ಳದೆ ತತ್ವಶಾಸ್ತ್ರ ದಲ್ಲೂ ಅಜ್ಜನ ತರಹ  ಆಸಕ್ತಿಹೊಂದಿದ್ದಾರೆ . H.H. ಜಯಚಾಮರಾಜೇಂದ್ರ ಒಡೆಯರವರ ತತ್ವಶಾಸ್ತ್ರದ ಬರಹಗಳಲ್ಲಿ ಒಲವು ಮತ್ತು ಹೆಮ್ಮೆ ಇದೆ .ಅದಲ್ಲದೆ ಪ್ರವಾಸ ಸಾಹಿತ್ಯ ,ಆತ್ಮಕಥೆ ಮತ್ತು ವೈಜ್ಞಾನಿಕ  ಕಲ್ಪಕತೆಗಳಲ್ಲಿ  ಆಸಕ್ತಿ ಹೊಂದಿದ್ದಾರೆ .

ಕ್ರೀಡಾ ಕ್ಷೇತ್ರದಲ್ಲಿ ಅವರಿಗೆ ಹೆಚ್ಚು ಪ್ರಿಯವಾದದ್ದು ಕುದುರೆ ಸವಾರಿ ಮತ್ತು lawn ಟೆನ್ನಿಸ್ .ಅವರು ಅಮೇರಿಕಾ ದಲ್ಲಿ ವಿದ್ಯಾರ್ಥಿ ಆಗಿದ್ದಾಗ national basket association  league ನ ಅಭಿಮಾನಿ ಆಗಿದ್ದರು .

Share on

Join Our News Letter



To Contact  YKC Wadiyar

Click this button below and send your message.

The Palace,
Mysore – 570001

The Bangalore Palace,
No.1, Palace Road,Vasanthnagar,
Bangalore – 560052

Get In Touch

error: Content is protected !!